ಸೈಯದಾ ಅನ್ವರಾ ತೈಮೂರ್ (೨೪ ನವೆಂಬರ್ ೧೯೩೬ - ೨೮ ಸೆಪ್ಟೆಂಬರ್ ೨೦೨೦) ಒಬ್ಬ ಭಾರತೀಯ ಮಹಿಳಾ ರಾಜಕಾರಣಿ. ಇವರು ೬ ಡಿಸೆಂಬರ್ ೧೯೮೦ ರಿಂದ ೩೦ ಜೂನ್ ೧೯೮೧ ರವರೆಗೆ ಭಾರತದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ೨೮ ಸೆಪ್ಟೆಂಬರ್ ೨೦೨೦ ರಂದು ಆಸ್ಟ್ರೇಲಿಯಾದಲ್ಲಿ ನಿಧನರಾದರು ಅವರು ಅಸ್ಸಾಂನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯೆಯಾಗಿದ್ದರು. == ವೈಯಕ್ತಿಕ ಜೀವನ == ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಪಡೆದಿದ್ದರು. ಅನ್ವರಾ ಅವರು ೧೯೫೬ ರಲ್ಲಿ ಜೋರ್ಹತ್‌ನ ದೇವಿಚರಣ್ ಬರುವಾ ಬಾಲಕಿಯರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿದ್ದರು. == ರಾಜಕೀಯ ವೃತ್ತಿಜೀವನ == ಅಸ್ಸಾಂನ ಇತಿಹಾಸದಲ್ಲಿ, ಅವರು ರಾಜ್ಯದ ಏಕೈಕ ಮಹಿಳಾ ಮತ್ತು ಮುಸ್ಲಿಂ ಮುಖ್ಯಮಂತ್ರಿಯಾಗಿದ್ದರು. ಅವರು ೬ ಡಿಸೆಂಬರ್ ೧೯೮೦ ರಿಂದ ೩೦ ಜೂನ್ ೧೯೮೧ ರವರೆಗೆ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ಭಾರತೀಯ ಇತಿಹಾಸದಲ್ಲಿಯೂ ಸಹ, ಸೈಯದಾ ಅನ್ವರಾ ತೈಮೂರ್ ಅವರು ದೇಶದ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಆಗಿದ್ದರು. ಅಸ್ಸಾಂ ರಾಜ್ಯವನ್ನು ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಿದಾಗ ಅವರ ಮುಖ್ಯಮಂತ್ರಿ ಅವಧಿಯು ಕೊನೆಗೊಂಡಿತು. ೧೯೮೩ ರಿಂದ ೧೯೮೫ ರವರೆಗೆ ಅವರು ಅದೇ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದರು. ಅವರು ೧೯೭೨, ೧೯೭೮, ೧೯೮೩, ಮತ್ತು ೧೯೯೧ ರಲ್ಲಿ ಅಸ್ಸಾಂ ಅಸೆಂಬ್ಲಿಯ ( ಎಂಎಲ್ಎ ) ಚುನಾಯಿತ ಸದಸ್ಯರಾಗಿದ್ದರು. ೧೯೮೮ ರಲ್ಲಿ ಅವರು ಭಾರತೀಯ ಸಂಸತ್ತಿಗೆ ( ರಾಜ್ಯಸಭೆ ) ನಾಮನಿರ್ದೇಶನಗೊಂಡರು. ೧೯೯೧ ರಲ್ಲಿ ಅವರು ಅಸ್ಸಾಂನಲ್ಲಿ ಕೃಷಿ ಸಚಿವರಾಗಿ ನೇಮಕಗೊಂಡರು. ಅನ್ವರಾ ೨೦೧೧ ರಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ ಸೇರಿದರು. ೨೦೧೮ ರ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅಂತಿಮ ಕರಡಿನಲ್ಲಿ ಸೇರಿಸದ ಗಮನಾರ್ಹ ಹೆಸರುಗಳಲ್ಲಿ ಅನ್ವರಾ ಕೂಡ ಸೇರಿದ್ದಾರೆ, ಇದಕ್ಕಾಗಿ ತನ್ನ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ತನ್ನ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸದಿರಬಹುದು ಎಂದು ಅವರು ನಂತರ ಸ್ಪಷ್ಟಪಡಿಸಿದ್ದಾರೆ. == ಮರಣ == ತೈಮೂರ್ ೨೮ ಸೆಪ್ಟೆಂಬರ್ ೨೦೨೦ ರಂದು ಆಸ್ಟ್ರೇಲಿಯಾದಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು. ಅಲ್ಲಿ ಅವರು ತಮ್ಮ ಮಗನೊಂದಿಗೆ ನಾಲ್ಕು ವರ್ಷ ಕಳೆದಿದ್ದರು. == ಸ್ಥಾನಮಾನಗಳು == == ಟಿಪ್ಪಣಿಗಳು == ಎನ್‌ಸೈಕ್ಲೋಪೀಡಿಯಾ ಆಫ್ ಶೆಡ್ಯೂಲ್ಡ್ ಟ್ರೈಬ್ಸ್ ಇನ್ ಇಂಡಿಯಾ: ಇನ್ ಫೈವ್ ವಾಲ್ಯೂಮ್ಸ್ ಬೈ ಪಿಕೆ ಮೊಹಂತಿ ಪುಟ ೧೨೪. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಪ್ರೊಫೈಲ್